Tuesday, 2 July 2013

ಅಯ್ಯೋ ಕರೆಂಟೆ....



ಹುಷಾರು ಇದು ಮಳೆಗಾಲದ ಕರೆಂಟು
ಯಾವಾಗ ಕೈ ಕೊಡುವುದೋ ಯಾರಿಗೆ ಗೊತ್ತು
ಹೋಗುವುದು ಥಟ್ ಅಂತ ತಾನು ಹಾಯಾಗಿ
ನೀಡುವುದಿಲ್ಲ ವಾಪಸು ಬರುವುದರ ಗ್ಯಾರಂಟಿ


ಮಳೆರಾಯನ ಗುಡುಗು ಸಿಡಿಲುಗಳಿಗೆ ಸಿಲುಕಿ
ಬೀಳುವವು ಕೆಇಬಿಯ ಕಂಬಗಳು ಉರುಳಿ
ಆಗ ಹೋಯಿತೆಂದರೆ ಒಮ್ಮೆ ಕರೆಂಟು
ತಿರುಗಿ ಬರುವುದು ಎರಡು ವಾರ ಲೇಟು


ಮೊಬೈಲ್, ಲ್ಯಾಪ್ ಟಾಪ್ ಬ್ಯಾಟರಿಗಳ ಅಧೋಗತಿ
ಕರೆಂಟು ಇಲ್ಲವೆಂದರೆ ಎಲ್ಲದರಲ್ಲೂ ಫಜೀತಿ
ರುಬ್ಬಲು ಇತ್ತ ಮಿಕ್ಸಿಯಿಲ್ಲ ಅತ್ತ ಗ್ರೈಂಡರ್ ಇಲ್ಲ
ಹೆಂಗಸರ ಗೋಳನ್ನು ಹೇಳಿ ಕೇಳುವವರಿಲ್ಲ


ಹೋಗಲಾರದು ಹೊತ್ತು ಸುಮ್ಮನೆ ಕುಳಿತಿರಲು
ಕರೆಂಟಿಲ್ಲದಿದ್ದರೆ ಆಗುವ ಬೇಸರ ಬಲು ಜೋರು
ಇಂದಿನ ಜನಜೀವನ ಪೂರ್ತಿ ಯಾಂತ್ರಿಕ
ಕರೆಂಟಿಲ್ಲವೆಂದರೆ ಆ ಕ್ಷಣ ಘೋರ ನರಕ 




1 comment:

  1. reminded mansoon in sirsi... ;)

    -vinayaka sp

    ReplyDelete