Thursday, 20 June 2013


ಭಾಸವಾಗುತಿಹುದು ಈ ಕತ್ತಲ ಅಮಾವಾಸ್ಯೆ

ಭಾವತರಂಗಗಳ ಮೇಲೆ ಬೆಳದಿಂಗಳ ಚೆಲ್ಲಿದಂತೆ

ನಿಶ್ಶಬ್ದದ ನೀರವತೆಯ ನಡುವಲ್ಲೂ ಕ್ಷೀಣವಾಗಿ

ಪ್ರತಿಧ್ವನಿಸುತಿದೆ ಉಸಿರಿನ ಪಿಸುಗುಟ್ಟುವಿಕೆಯು

ಎಲ್ಲೋ ಹೊಮ್ಮುವ ಕೀಟಗಳ ಸಂಗೀತದೊಂದಿಗೆ

ಸಂಯೋಜನೆಗೊಳ್ಳುವಂತಿದೆ ಎದೆಯಾಳದ ರಾಗವು

ತಂಪಾದ ಗಾಳಿಯೊಂದಿಗೆ ತರೆಗೆಲೆಗಳ ಸದ್ದು

ಬಡಿದೆಬ್ಬಿಸಿದೆ ಮನದಲ್ಲಿ ಮಲಗಿದ್ದ ನಿರೀಕ್ಷೆಗಳನ್ನು

ಕಾಣದ ಚಂದಿರನನ್ನು ಹುಡುಕುವ ಮಾಯೆಯಲ್ಲಿ

ಪ್ರತಿ ಉಸಿರು ದೂರದೂರವಾಗುವ ಅನುಭೂತಿ

ಆಕಾಶದ ತಾರೆಗಳ ನಡುವಲ್ಲೆಲ್ಲೋ ಕಳೆದುಹೋಗಿದೆ

ತನ್ನತನವೆಂಬುದು ಹೇಳ ಹೆಸರಿಲ್ಲದಂತೆ

No comments:

Post a Comment