Sunday, 3 February 2013

ಏನೆಂದು ತಿಳಿಹೇಳಲಿ ಓ ಗೆಳೆಯ?
ಭಾವನೆಗಳ ಹೊಯ್ದಾಟದ ಕುರಿತು
ಸೋತುಹೋಗಿರುವ ನಾ ಎಂದೋ
ಕಣ್ಣುಮುಚ್ಚಾಲೆಯ ಮೋಹದಾಟದಲ್ಲಿ
ಕಳೆದುಹೋಗಿದೆ ನನ್ನೀ ಮನಸು
ಹಾಲಿನಲ್ಲಿ ಬೆರೆತಿಹ ನೀರಿನಂತೆ
ಹತ್ತಿಕ್ಕಲಾಗದ ಒಲವಿನ ಪ್ರವಾಹಕ್ಕೆ
ನುಚ್ಚುನೂರಾಗಿದೆ ಈ ಪುಟ್ಟ ಹೃದಯವು
ಶೂನ್ಯವಾಗಿದೆ ಕಂಗಳ ಕಾಂತಿಯು
ಪ್ರತೀಕ್ಷೆಯ ಕಣ್ಣೀರಿನ ಹೊಳೆಯಲ್ಲಿ ಮಿಂದು
ಮಿಡಿಯುತಿದೆ ಬಿಸಿಉಸಿರು ಮಾತ್ರ
ನಿನ್ನ ಪ್ರೇಮದ ನಿರೀಕ್ಷೆಯಲ್ಲಿ..........

No comments:

Post a Comment